ಲಾಗಿನ್
V2News
ತಾಜಾ ಸುದ್ದಿ

ಸುದ್ದಿ ಹುಡುಕಾಟ

EPI Recruitment 2026: ಪಿಐಎಲ್‌ನಲ್ಲಿ ಉದ್ಯೋಗಾವಕಾಶ; ಬಿಇ, ಬಿಟೆಕ್ ಪದವೀಧರರು ಅರ್ಹರು

ಇಂಜಿನಿಯರಿಂಗ್ ಪ್ರಾಜೆಕ್ಟ್ಸ್ ಇಂಡಿಯಾ ಲಿಮಿಟೆಡ್ (EPI) ಸಹಾಯಕ ಮತ್ತು ಹಿರಿಯ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬಿ.ಇ/ಬಿ.ಟೆಕ್ ಪದವಿ, ಸಂಬಂಧಿತ ಅನುಭವ ಹೊಂದಿರುವವರು ಆನ್‌ಲೈನ್ ಮೂಲಕ ಜುಲೈ 3ರೊಳಗೆ ಅರ್ಜಿ ಸಲ್ಲಿಸಿ. ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ವಿಭಾಗಗಳಲ್ಲಿ ಮಾಸಿಕ 40,000-70,000 ರೂ. ವೇತನ ಲಭ್ಯ. ಇದು ಕೇಂದ್ರ ಸರ್ಕಾರದ ಅಧೀನದ ಉದ್ಯಮದಲ್ಲಿ ಕಾರ್ಯನಿರ್ವಹಿಸುವ ಉತ್ತಮ ಅವಕಾಶ.

ವರದಿ: TV9 Web Team 2 months ago

‘ಧುರಂಧರ್ 2’ ಯಶಸ್ಸಿನ ಬಳಿಕ ಹೊಸ ಸಿನಿಮಾ ಒಪ್ಪಿಕೊಂಡ ರಣ್ವೀರ್ ಸಿಂಗ್

Ranveer Singh new movie: ‘ಧುರಂಧರ್’ ಮತ್ತು ‘ಧುರಂಧರ್ 2’ ಅಂಥಹಾ ಎರಡೂ ಸೂಪರ್ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ರಣ್ವೀರ್ ಸಿಂಗ್ ಅವರ ಮುಂದಿನ ಸಿನಿಮಾ ಯಾವುದಾಗಿರಲಿದೆ ಎಂಬ ಕುತೂಹಲ ಸಹಜವಾಗಿಯೇ ಇದೆ. ರಣ್ವೀರ್ ಅವರ ಮುಂದಿನ ಸಿನಿಮಾ ಬಗ್ಗೆ ಈಗಾಗಲೇ ಹಲವು ಸುದ್ದಿಗಳು ಹರಿದಾಡುತ್ತಿವೆ. ಇದೀಗ ರಣ್ವೀರ್ ಅವರ ಹೊಸ ಸಿನಿಮಾದ ಬಗ್ಗೆ ಖಚಿತ ಸುದ್ದಿ ಹೊರಬಿದ್ದಿದೆ.

ವರದಿ: TV9 Web Team 2 months ago

ಕಾರಹುಣ್ಣಿಮೆ: ಮಸೀದಿ ಬಳಿ ಪಟಾಕಿ ಸಿಡಿಸಿದ್ದಕ್ಕೆ ಗಲಾಟೆ, ರೈತನ ಕೈ ಕಟ್

Haveri News: ಮೊನ್ನೇ ಅಷ್ಟೇ ಮೋಹರಂ ಹಬ್ಬ ಮುಗಿದಿದ್ದು, ಹಲವೆಡೆ ಹಿಂದೂ ಮುಸ್ಲಿಮರು ಸೇರಿಕೊಂಡು ಹಬ್ಬವನ್ನು ಯಶಸ್ವಿ ಮಾಡಿದ್ದಾರೆ. ಯಾವುದೇ ದೊಡ್ಡ ಅಹಿತಕರ ಘಟನೆಗಳಾಗಿರುವ ವರದಿಯಾಗಿಲ್ಲ. ಆದ್ರೆ, ನಿನ್ನೆ(ಜೂನ್ 29) ರೈತರ ಹಬ್ಬವೆಂದು ಕರೆಯಲ್ಪಡುವ ಕಾರಹುಣ್ಣಿಮೆ ಆಚರಣೆ ವೇಳೆ ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಾರೆ ಎನ್ನುವ ಕಾರಣಕ್ಕೆ ಗಲಾಟೆ ಮಾಡಿದ್ದು, ಮಾತಿನ ಚಕಮಕಿ ಮಾರಾಮಾರಿಗೆ ತಿರುಗಿದೆ.

ವರದಿ: TV9 Web Team 2 months ago

ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್​​ ಶಾಸಕರ ಪೈಪೋಟಿ ನಡುವೆ ತನಗೆ ಮಂತ್ರಿಗಿರಿಯೇ ಬೇಡವೆಂದ ಕೆ.ಎನ್​​. ರಾಜಣ್ಣ!

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವಕಾಶ ಸಿಕ್ಕರೂ ತಮಗೆ ಸಚಿವ ಸ್ಥಾನ ಬೇಡವೆಂದು ಹೇಳಿದ್ದು, ಜನಪರ ಆಡಳಿತಕ್ಕೆ ಒತ್ತು ನೀಡಿದ್ದಾರೆ. ತಾನು ಎರಡು ವರ್ಷ ಮಂತ್ರಿ ಕೆಲಸವನ್ನು ಪ್ರಾಮಾಣಿಕವಾಗಿ ಮತ್ತು ದಕ್ಷತೆಯಿಂದ ಮಾಡಿದ್ದು, ಈಗ ಬೇರೆಯವರಿಗೂ ಅವಕಾಶ ಕೊಡಲಿ ಎಂದವರು ಹೇಳಿದ್ದಾರೆ.

ವರದಿ: TV9 Web Team 2 months ago

ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ; ಹಣ ಎಣಿಸುವಾಗ ನಿಯಮಗಳನ್ನು ಹೇಗೆ ಉಲ್ಲಂಘಿಸಲಾಯಿತು?

ರಾಮ ಮಂದಿರದ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ಎಸ್​ಬಿಐ ನಡುವೆ ಸಹಿ ಹಾಕಲಾದ ಒಪ್ಪಂದದಲ್ಲಿ ಹಲವಾರು ಲೋಪಗಳನ್ನು ಕಂಡುಹಿಡಿದಿದೆ. ಈಗಾಗಲೇ ಅಯೋಧ್ಯೆಯ ಸ್ಥಳೀಯ ನ್ಯಾಯಾಲಯವೊಂದು ದೇಣಿಗೆ ಹಗರಣದ ಆರೋಪ ಎದುರಿಸುತ್ತಿರುವ ಎಲ್ಲಾ ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಶ್ರೀರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಅಕ್ರಮಗಳು ಹಾಗೂ ಕಾಣಿಕೆಗಳ ದುರುಪಯೋಗದ ವರದಿಗಳ ಕುರಿತು ಉತ್ತರ ಪ್ರದೇಶ ಪೊಲೀಸರು ನಡೆಸುತ್ತಿರುವ ತೀವ್ರ ತನಿಖೆಯ ಬೆನ್ನಲ್ಲೇ ನ್ಯಾಯಾಲಯ ಸೋಮವಾರ ಈ ತೀರ್ಪು ನೀಡಿದೆ. 

ವರದಿ: TV9 Web Team 2 months ago

IND vs ENG: 6 ಎಡಗೈ ದಾಂಡಿಗರು: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11

India vs England: ಭಾರತ ಮತ್ತು ಇಂಗ್ಲೆಂಡ್ ನಡುವಣ 8 ಪಂದ್ಯಗಳ ಸರಣಿಯು ನಾಳೆಯಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಮೊದಲಿಗೆ 5 ಮ್ಯಾಚ್​ಗಳ ಟಿ20 ಸಿರೀಸ್ ನಡೆಯಲಿದೆ. ಇದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಜರುಗಲಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ...

ವರದಿ: TV9 Web Team 2 months ago

ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್ ಜಾಮೀನು ಅರ್ಜಿ ವಜಾ

ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಮುಖ್ಯ ಆರೋಪಿ ಫಯಾಜ್‌ನ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ವಜಾಗೊಳಿಸಿದೆ. ಈ ಹಿಂದೆ ಜಿಲ್ಲಾ ನ್ಯಾಯಾಲಯವೂ ವಜಾಗೊಳಿಸಿತ್ತು. ಪ್ರಕರಣದ ಗಾಂಭೀರ್ಯತೆ ಮತ್ತು ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯನ್ನು ಪರಿಗಣಿಸಿ ನ್ಯಾಯಾಲಯ ಈ ನಿರ್ಧಾರ ತೆಗೆದುಕೊಂಡಿದೆ. ಸಿಐಡಿ ತನಿಖೆ ತೀವ್ರಗೊಂಡಿದ್ದು, ನೇಹಾ ಕುಟುಂಬಕ್ಕೆ ಇದು ಕಾನೂನು ಹೋರಾಟದಲ್ಲಿ ಸಿಕ್ಕ ದೊಡ್ಡ ಗೆಲುವು.

ವರದಿ: TV9 Web Team 2 months ago

RRB Recruitment 2026: ಆರ್‌ಆರ್‌ಬಿಯಲ್ಲಿ ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ಭರ್ಜರಿ ನೇಮಕಾತಿ; ಪದವೀಧರರು ಅರ್ಹರು!

ರೈಲ್ವೇ ನೇಮಕಾತಿ ಮಂಡಳಿಯು (RRB) ಸೆಕ್ಷನ್ ಕಂಟ್ರೋಲರ್ ಹುದ್ದೆಗಳಿಗೆ 119 ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ವೇತನ ಶ್ರೇಣಿ ಮಾಸಿಕ 35,400 ರೂ.ನಿಂದ ಆರಂಭವಾಗುತ್ತದೆ. ಆನ್‌ಲೈನ್ ಅರ್ಜಿ ಸಲ್ಲಿಕೆ ಜುಲೈ 15 ರಿಂದ ಆಗಸ್ಟ್ 14 ರವರೆಗೆ. ಯುವಕ-ಯುವತಿಯರಿಗೆ ಇದು ಸುವರ್ಣಾವಕಾಶ, ಕೂಡಲೇ ಅರ್ಜಿ ಸಲ್ಲಿಸಿ ರೈಲ್ವೇಯಲ್ಲಿ ಉದ್ಯೋಗ ಪಡೆಯಿರಿ.

ವರದಿ: TV9 Web Team 2 months ago

ಬ್ಯಾಂಕುಗಳ ಮಿಸ್-ಸೆಲ್ಲಿಂಗ್​ನಿಂದ ಹಿಡಿದು ಇಪಿಎಫ್​ಒವರೆಗೆ, ಜುಲೈನಿಂದ ಬದಲಾಗಲಿರುವ 8 ಹಣಕಾಸು ನಿಯಮಗಳು

Important Financial Rules change from July 2026: ಜನಸಾಮಾನ್ಯರ ಹಣಕಾಸು ಸ್ಥಿತಿ ಮೇಲೆ ಪರಿಣಾಮ ಬೀರುವಂತಹ ಕೆಲ ಕ್ರಮಗಳು ಜುಲೈ 1ರಿಂದ ಜಾರಿಗೆ ಬರಲಿವೆ. ಆಧಾರ್​ಗೆ ಇಮೇಲ್ ಐಡಿ ಲಿಂಕ್ ಮಾಡಲು ಇದ್ದ ನಿಯಮದಲ್ಲಿ ಬದಲಾವಣೆ ಇದೆ. ಇಂಥ ಏಳೆಂಟು ಪ್ರಮುಖ ನಿಯಮ ಬದಲಾವಣೆ ಮತ್ತು ಕ್ರಮಗಳು ಜುಲೈನಿಂದ ಆರಂಭವಾಗುತ್ತವೆ.

ವರದಿ: TV9 Web Team 2 months ago

ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಕರ್ನಾಟಕ ಸರ್ಕಾರವು ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಅಭಿರಾಮ್ ಜಿ. ಶಂಕರ್, ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಸೇರಿದಂತೆ ಪ್ರಮುಖ ಅಧಿಕಾರಿಗಳಿಗೆ ಹೊಸ ಜವಾಬ್ದಾರಿಗಳನ್ನು ವಹಿಸಲಾಗಿದೆ. ಇದರ ಜೊತೆಗೆ, ಪುರಸಭೆ ಆಡಳಿತ ನಿರ್ದೇಶಕರ ಕ್ಯಾಡರ್ ಹುದ್ದೆಗೆ ಸಮಾನವಾದ ಸ್ಥಾನಮಾನ ಮತ್ತು ಜವಾಬ್ದಾರಿಗಳನ್ನು ಹೊಂದಿರುವ ಕೆಲವು ಹುದ್ದೆಗಳನ್ನು ಐಎಎಸ್ (ವೇತನ) ನಿಯಮಗಳು–2016ರ ನಿಯಮ 12ರ ಅಡಿಯಲ್ಲಿ ಸಮಾನ ಹುದ್ದೆಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ.

ವರದಿ: TV9 Web Team 2 months ago

ನ್ಯಾಯಾಲಯದಲ್ಲಿ ಹೈಡ್ರಾಮಾ; ಸಿಯಾ ಗೋಯಲ್ ಸಹೋದರನಿಗೆ ವಕೀಲರಿಂದ 10 ಕೋಟಿ ರೂ. ಮಾನನಷ್ಟ ನೋಟಿಸ್ ಜಾರಿ!

ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಈಗ ಹೊಸದೊಂದು ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ ಅ...

ವರದಿ: Super Admin 2 months ago

ರಾಜ್ಯ ಬಜೆಟ್ ಪ್ರಕಟ: ಗೃಹಲಕ್ಷ್ಮಿ ಯೋಜನೆ ಮುಂದುವರಿಕೆ, ಕೃಷಿ ವಲಯಕ್ಕೆ 40,000 ಕೋಟಿ ರೂ. ಘೋಷಣೆ!

ಮುಖ್ಯಮಂತ್ರಿಗಳು ಇಂದು ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಮಂಡಿಸಿದ್ದು, ಕೃಷಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ವರದಿ: ರಾಘವೇಂದ್ರ ಬಿ. 2 months ago
footer ad
ಚಾಟ್ ಮಾಡಿ